ವೇಗವಾಗಿ ತೂಕ ಕರಗಿಸಲು ನೆರವಾಗುವ 9 ಯೋಗಾಸನಗಳು
Shamlee Pathare
December 11, 2023
Shamlee Pathare
December 11, 2023
ಪುರಾತನ ಭಾರತೀಯ ಪದ್ಧತಿಯಲ್ಲಿ ಯೋಗ ಎಂದರೆ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಕ್ರಿಯೆಯನ್ನು ಒಟ್ಟಾಗಿ ಅಭ್ಯಾಸ ಮಾಡುವುದು. ಯೋಗಾಭ್ಯಾಸ ಈಗ ಜಾಗತಿಕ ಮಟ್ಟದಲ್ಲಿ ಚಿರಪರಿಚಿತಗೊಂಡಿದೆ.
ಈಚಿನ ದಿನಗಳಲ್ಲಿ ಬಹುತೇಕ ಜನರು ದೈಹಿಕ ಚಟುವಟಿಕೆ ಅಥವಾ ಆಸನಗಳನ್ನು (ಕೆಲವು ನಿರ್ದಿಷ್ಟ ಭಂಗಿಗಳನ್ನು ವಿವಿಧ ಶೈಲಿಗಳಲ್ಲಿ ಒಟ್ಟುಗೂಡಿಸಿ ಅಭ್ಯಾಸ ಮಾಡುವುದು) ಮಾಡುವುದನ್ನು ಯೋಗ ಎಂದು ಭಾವಿಸುತ್ತಾರೆ.
ಆಸನಗಳನ್ನು ಅಭ್ಯಾಸ ಮಾಡುವ ಮುಖ್ಯ ಉದ್ದೇಶ ಶಕ್ತಿ-ಸಾಮರ್ಥ್ಯ ಗಳಿಸುವುದು. ಇದರ ಜತೆಗೇ ದೇಹದ ಸಮತೋಲನ, ಹೊಂದಾಣಿಕೆ ಮತ್ತು ಫ್ಲೆಕ್ಸಿಬಿಲಿಟಿ ಸುಧಾರಿಸುವುದು, ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುವುದು ಗುರಿಯೂ ಇದೆ.
ಯೋಗಾಭ್ಯಾಸಕ್ಕೆ 5 ಪ್ರಾಥಮಿಕ ನಿಯಮಗಳು:
ಯೋಗ ಅಭ್ಯಾಸ ಮಾಡುವುದು ತೂಕ ಇಳಿಕೆಗೆ ಪರಿಣಾಮಕಾರಿ ವಿಧಾನ. ಇದರ ಜತೆಗೆ ಆರೋಗ್ಯಕರ ಆಹಾರ ಸೇವಿಸುವುದನ್ನು ರೂಢಿಸಿಕೊಂಡರೆ ಅತ್ಯುತ್ತಮ ರಿಸಲ್ಟ್ ದೊರಕುತ್ತದೆ.
ನಿಯಮಿತವಾಗಿ ಯೋಗ ಅಭ್ಯಾಸ ಮಾಡುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಮತ್ತು ಮನಸ್ಸು ಶಾಂತಿಯಿಂದ ಇರುತ್ತದೆ. ಆಗ ನಾವು ಸೇವಿಸುವ ಆಹಾರದ ಕುರಿತು ಎಚ್ಚರಿಕೆ ಮೂಡುತ್ತದೆ. ಮತ್ತು ಆರೋಗ್ಯಕ್ಕೆ ಒಳ್ಳೆಯದಾಗಿರುವ ಆಹಾರವನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜಂಕ್ ಫುಡ್ ಸೇವನೆ ತಂತಾನೇ ಕಡಿಮೆಯಾಗುತ್ತದೆ. ಸಹಜವಾಗಿಯೇ ಇದು ತೂಕ ಇಳಿಕೆಗೆ ನೆರವಾಗುತ್ತದೆ. ಯೋಗದ ಕೆಲವು ಲಾಭಗಳು:
ಒತ್ತಡದಿಂದಾಗಿ ದೇಹ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ನೋವು, ಉದ್ವೇಗ, ನಿದ್ರಾಹೀನತೆ, ಏಕಾಗ್ರತೆಯ ಕೊರತೆಯ ರೂಪದಲ್ಲಿ ಒತ್ತಡ ನಮಗೆ ಸಮಸ್ಯೆಯಾಗಬಲ್ಲದು. ಹೆಚ್ಚಿನ ಸಂದರ್ಭಗಳಲ್ಲಿ ತೂಕ ಹೆಚ್ಚಳಕ್ಕೆ ಒತ್ತಡವೇ ಮುಖ್ಯ ಕಾರಣವಾಗಿರುತ್ತದೆ. ಒತ್ತಡ ನಿರ್ವಹಣೆಗೆ ಯೋಗ ಸಹಾಯ ಮಾಡಬಲ್ಲದು.
ಒತ್ತಡ ನಿರ್ವಹಣೆ ಜತೆಗೆ ಯೋಗದಿಂದ ದೈಹಿಕ ಲಾಭಗಳೂ ಇವೆ. ಹೆಚ್ಚಿನ ತೂಕ ಕಳೆದುಕೊಳ್ಳಲು ಹಾಗೂ ಉತ್ತಮ ದೈಹಿಕ-ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಾಯ ಮಾಡುತ್ತದೆ.
ಸಾರಾಂಶ
ಪುರಾತನ ಪದ್ಧತಿಯಾಗಿರುವ ಯೋಗಕ್ಕೆ ಅಸಾಧಾರಣ ಚಿಕಿತ್ಸಕ ಸಾಮರ್ಥ್ಯಗಳಿವೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಯೋಗ ಅತ್ಯವಶ್ಯ ಪಾತ್ರ ವಹಿಸಬಲ್ಲದು. ಕೆಲವರು ಯೋಗದ ಲಾಭಗಳನ್ನು ಪ್ರಮಾಣ ಸಹಿತವಾಗಿ ಒಪ್ಪಿಕೊಂಡರೆ ಇನ್ನೂ ಕೆಲವರು ತೂಕ ಇಳಿಕೆ ವಿಷಯದಲ್ಲಿ ಯೋಗದ ಸಾಮರ್ಥ್ಯ ಕುರಿತು ಕೊಂಚ ಅನುಮಾನ ವ್ಯಕ್ತಪಡಿಸುತ್ತಾರೆ. ಹಾಗಿದ್ದರೂ ಸಹ ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಪೌಷ್ಟಿಕಾಂಶಗಳಿರುವ ಉತ್ತಮ ಡಯಟ್ ಜತೆಗೆ ಯೋಗ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ. ನೆನಪಿಟ್ಟುಕೊಳ್ಳಬೇಕಾದ ಅಂಶ ಎಂದರೆ ಯೋಗಾಭ್ಯಾಸದ ವಿಧಾನ ಪ್ರತಿ ವ್ಯಕ್ತಿಗೂ ವೈಯಕ್ತಿಕ ಮತ್ತು ವಿಶಿಷ್ಟವಾಗಿರುತ್ತದೆ. ಯೋಗಾಸನಗಳನ್ನು ಮಾಡುವಾಗ ಸರಿಯಾದ ಪೋಸ್ಶರ್‌ಗಳನ್ನು (ಭಂಗಿಗಳನ್ನು) ಮಾಡುವುದು ಮುಖ್ಯವಾದುದು. ನಿರಂತರ ಅಭ್ಯಾಸ ಮತ್ತು ಪರಿಶ್ರಮದಿಂದ ಇದು ಸಾಧ್ಯವಾಗುತ್ತದೆ.
ಯೋಗ ಅಭ್ಯಾಸ ಮಾಡಲು ಪರಿಶ್ರಮ, ತಾಳ್ಮೆ ಮತ್ತು ದೀರ್ಘ ಪ್ರಯತ್ನ ಅತ್ಯವಶ್ಯ. ಇದರ ಫಲಿತಾಂಶ ಕಂಡುಕೊಳ್ಳಲು ಸಮಯ ಬೇಕಾಗುತ್ತದೆ.
ಈ ಯೋಗ ಆಸನಗಳು ಪ್ರಮುಖವಾಗಿ ದೇಹದ ಫ್ಲೆಕ್ಸಿಬಿಲಿಟಿ ಹಾಗೂ ಮೂಳೆಗಳ ಸಾಮರ್ಥ್ಯ ಹೆಚ್ಚಿಸುವುದರ ಕುರಿತು ಗಮನ ನೀಡುತ್ತದೆ. ದೇಹದ ಕೊಬ್ಬಿನಂಶ ಕರಗಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಈ ಆಸನಗಳು ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಗಮನಾರ್ಹ ಪಾತ್ರ ವಹಿಸುತ್ತದೆ.
ಹಲವು ಕಾರಣಗಳಿಗಾಗಿ ಮಾಂಸಖಂಡ ಅತ್ಯವಶ್ಯವಾಗಿರುತ್ತದೆ. ಉದಾಹರಣೆ ನೀಡುವುದಾದರೆ, ಆರೋಗ್ಯಕರ ತೂಕ ಕಾಪಾಡಲು, ಗಾಯಗಳಾಗುವ ಸಾಧ್ಯತೆ ಕಡಿಮೆ ಮಾಡಲು, ಮೂಳೆಗಳ ಸಾಮರ್ಥ್ಯ ಹೆಚ್ಚಿಸಲು ಮಾಂಸಖಂಡ ನೆರವಾಗುತ್ತದೆ.
ತೂಕ ಇಳಿಕೆಗೆ ನೆರವಾಗುವ ಕೆಲವು ಯೋಗ ಆಸನಗಳು ಹಾಗೂ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಹೊಟ್ಟೆ ಮತ್ತು ಬೆನ್ನಿನ ಭಾಗದ ಸ್ನಾಯುಗಳನ್ನು ಗಟ್ಟಿಗೊಳಿಸಲು ಚತುರಂಗ ದಂಡಾಸನ ಅತ್ಯುತ್ತಮ ವಿಧಾನ. ನೋಡಲು ಆಸನ ಸರಳ ಎನಿಸಿದರು ಅದರ ಲಾಭಗಳು ಮತ್ತು ಸಾಕಷ್ಟಿವೆ. ಹೊಟ್ಟೆ, ಬೆನ್ನಿನ ಸುತ್ತಲಿನ ಸ್ನಾಯುಗಳಲ್ಲಿ ಸೆಳೆತದ ಅನುಭವ ಆದಾಗ ಮಾತ್ರ ಚತುರಂಗ ದಂಡಾಸನ ಭಂಗಿ ಸೂಕ್ತವಾಗಿದೆ ಎಂದು ಅರ್ಥ.
ತೊಡೆ ಮತ್ತು ಭುಜಗಳ ಸ್ನಾಯುಗಳನ್ನು ಗಟ್ಟಿಗೊಳಿಸುವುದರ ಜತೆಗೆ ಏಕಾಗ್ರತೆಯ ಸುಧಾರಣೆಗೂ ವೀರಭದ್ರಾಸನ ಸಹಾಯ ಮಾಡುತ್ತದೆ. ಹೆಚ್ಚು ಹೊತ್ತು ಈ ಭಂಗಿ ಅಭ್ಯಾಸ ಮಾಡಿದಷ್ಟೂ ಫಲಿತಾಂಶ ಹೆಚ್ಚು ಉತ್ತಮವಾಗಿರುತ್ತದೆ. ಕೆಲವು ನಿಮಿಷಗಳ ಕಾಲ ವೀರಭದ್ರಾಸನ ಭಂಗಿಯಲ್ಲಿದ್ದರೆ ತೊಡೆಯ ಭಾಗದಲ್ಲಿ ಹೆಚ್ಚು ಸೆಳೆತ ಉಂಟಾಗುತ್ತದೆ.
ಬೆನ್ನಿನ ಭಾಗ, ಕಾಲು ಮತ್ತು ಕೈಗಳನ್ನು ಗಟ್ಟಿಗೊಳಿಸುವುದರ ಜತೆಗೆ ದೇಹದ ಸಮತೋಲನತೆ ಸುಧಾರಿಸಲು ಈ ಭಂಗಿ ನೆರವಾಗುತ್ತದೆ. ವೀರಭದ್ರಾಸನ ಭಂಗಿಯಲ್ಲಿ ಇರುವಾಗ ಹೊಟ್ಟೆಯ ಸ್ನಾಯುಗಳನ್ನು ಒಳಗೆ ಎಳೆದಿಟ್ಟುಕೊಂಡರೆ ಹೊಟ್ಟೆಯ ಬೊಜ್ಜು ಕರಗಿಸಲು ಸಾಧ್ಯವಾಗುತ್ತದೆ. ಇದರಿಂದ ಫ್ಲ್ಯಾಟ್ ಆಗಿರುವ ಹೊಟ್ಟೆ ಹೊಂದಬಹುದು.
ಜೀರ್ಣಕ್ರಿಯೆ ಉತ್ತಮಗೊಳಿಸಲು ಹಾಗೂ ಹೊಟ್ಟೆ, ಸೊಂಟದ ಸುತ್ತ ಇರುವ ಬೊಜ್ಜು ಕರಗಿಸಲು ತ್ರಿಕೋಣಾಸನ ಸಹಾಯ ಮಾಡುತ್ತದೆ. ದೇಹದ ಎಲ್ಲಾ ಭಾಗಗಳಲ್ಲೂ ರಕ್ತ ಸಂಚಾರ ಸರಾಗವಾಗಿ ಆಗುವಂತೆ ಮಾಡುತ್ತದೆ. ಈ ಆಸನವನ್ನು ಎರಡೂ ಬದಿಗಳಲ್ಲಿ ಮಾಡುವುದರಿಂದ ಸೊಂಟದ ಸುತ್ತ ಇರುವ ಬೊಜ್ಜನ್ನು ಹೆಚ್ಚಿನ ಪ್ರಮಾಣದಲ್ಲಿ ಕರಗಿಸಲು ಸಾಧ್ಯವಾಗುತ್ತದೆ. ಜತೆಗೆ ತೊಡೆ, ಮಂಡಿಯ ಸ್ನಾಯುಗಳನ್ನು ಬಲಗೊಳಿಸಬಹುದು. ಸಮತೋಲನ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಈ ಆಸನ ನೆರವಾಗುತ್ತದೆ.
ಅಧೋ ಮುಖ ಶ್ವಾನಾಸನ ಇಡೀ ದೇಹವನ್ನು ಸಮತೋಲನಗೊಳಿಸುವುದರ ಜತೆಗೆ ನಿರ್ದಿಷ್ಟ ಸ್ನಾಯುಗಳಿಗೆ ಕೊಂಚ ಹೆಚ್ಚಿನ ಬಲ ನೀಡುತ್ತದೆ. ಕೈಗಳು, ತೊಡೆ, ಮಂಡಿ ಹಾಗೂ ಬೆನ್ನಿನ ಭಾಗವನ್ನು ಸದೃಢಗೊಳಿಸುತ್ತದೆ.
ಸ್ವಲ್ಪ ಸಮಯ ದೇಹವನ್ನು ಇದೇ ಭಂಗಿಯಲ್ಲಿ ಇಟ್ಟುಕೊಂಡು ಉಸಿರಾಟದ ಮೇಲೆ ಗಮನ ಹರಿಸುವುದರಿಂದ, ಸ್ನಾಯುಗಳನ್ನು ಸಕ್ರಿಯಗೊಳಿಸಿ ಅವುಗಳನ್ನು ಸಮತೋಲನಗೊಳಿಸುತ್ತದೆ. ಏಕಾಗ್ರತೆ ಮತ್ತು ರಕ್ತಸಂಚಾರ ಸುಧಾರಿಸಲು ಈ ಆಸನ ಉಪಯುಕ್ತ.
ಜೀರ್ಣಕ್ರಿಯೆ ಸಾಮರ್ಥ್ಯ, ಶಕ್ತಿ ಹೆಚ್ಚಿಸುವುದು ಸೇರಿದಂತೆ ಸರ್ವಾಂಗಾಸನದ ಲಾಭಗಳು ಹಲವಾರು. ಥೈರಾಯ್ಡ್ ಮಟ್ಟ ಹತೋಟಿಯಲ್ಲಿ ಇಡುವುದು, ಜೀರ್ಣಕ್ರಿಯೆ ಉತ್ತೇಜಿಸುವುದು ಇವುಗಳು ಹೆಚ್ಚು ಹೆಸರುವಾಸಿಯಾಗಿರುವ ಲಾಭಗಳು.
ಸರ್ವಾಂಗಾಸನ ಅಥವಾ ಭುಜದ ಮೇಲೆ ನಿಲ್ಲುವ ಆಸನ ದೇಹದ ಮೇಲ್ಭಾಗ, ಹೊಟ್ಟೆಯ ಸ್ನಾಯುಗಳು ಹಾಗೂ ಕಾಲಿನ ಭಾಗವನ್ನು ಸದೃಢಗೊಳಿಸುತ್ತದೆ. ಉಸಿರಾಟ ಪ್ರಕ್ರಿಯೆಗೆ ಚೈತನ್ಯ ನೀಡುವುದರ ಮೂಲಕ ಉತ್ತಮ ನಿದ್ರೆಗೆ ನೆರವಾಗಬಲ್ಲದು.
ಈ ಆಸನದಿಂದ ಸ್ನಾಯುಗಳ ಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆ, ಹಾರ್ಮೋನ್‌ಗಳ ನಿಯಂತ್ರಣ, ಥೈರಾಯ್ಡ್ ಮಟ್ಟ ಸುಧಾರಿಸುವುದು ಸಾಧ್ಯವಾಗುತ್ತದೆ. ಬೆನ್ನು ಮೂಳೆಗೆ ಹೆಚ್ಚಿನ ಶಕ್ತಿ ನೀಡುವ ಮೂಲಕ ಬೆನ್ನು ನೋವು ಕಡಿಮೆ ಮಾಡಲು ನೆರವಾಗುತ್ತದೆ.
ಸ್ವ್ಕಾಟ್ ಪ್ರಕ್ರಿಯೆಯನ್ನು ಯೋಗದ ಮೂಲಕ ಮಾಡುವ ವಿಧಾನ ಎಂದು ಸಹ ಈ ಆಸನವನ್ನು ಕರೆಯಲಾಗುತ್ತದೆ. ಆದರೆ ಸ್ಕ್ವಾಟ್‌ಗಿಂತಲೂ ಹೆಚ್ಚು ತೀವ್ರತರವಾಗಿರುತ್ತದೆ ಪರಿವೃತ್ತ ಉತ್ಕಟಾಸನ ಎನ್ನುವುದು ತಿಳಿದಿರಬೇಕಾದ ವಿಷಯ. ಹೊಟ್ಟೆಯ ಸ್ನಾಯುಗಳು, ಪೃಷ್ಠ ಮತ್ತು ತೊಡೆಯ ಮುಂಭಾಗದ ಸ್ನಾಯುಗಳನ್ನು ಬಲಗೊಳಿಸುತ್ತದೆ.
ಸೋಂಕುಗಳಿಗೆ ತುತ್ತಾಗದಂತೆ ಕಾಪಾಡುವ ಅಂಗಾಂಗಗಳು, ಜೀವಕೋಶಗಳನ್ನು ಒಳಗೊಂಡ ವ್ಯವಸ್ಥೆಯನ್ನು ಹಾಗೂ ಜೀರ್ಣಕ್ರಿಯೆಯನ್ನು ಸುಸ್ಥಿತಿಯಲ್ಲಿ ಇಡಲು ಈ ಆಸನ ಸಹಕಾರಿಯಾಗಿದೆ.
ಸೂರ್ಯ ನಮಸ್ಕಾರ ಮಾಡುವುದು ವಾರ್ಮ್ ಅಪ್ ಮಾಡುವುದಕ್ಕಿಂತಲೂ ದೇಹಕ್ಕೆ ಹೆಚ್ಚಿನ ಲಾಭ ನೀಡುತ್ತದೆ. ರಕ್ತಸಂಚಾರ ಸರಾಗವಾಗಿ ಆಗುತ್ತದೆ. ದೇಹದ ಪ್ರಮುಖ ಸ್ನಾಯುಗಳನ್ನು ಸದೃಢಗೊಳಿಸುವುದರ ಜತೆಗೆ ಸೊಂಟದ ಬೊಜ್ಜು ಕರಗಿಸುತ್ತದೆ. ಕೈಗಳ ಸಾಮರ್ಥ್ಯ, ಜೀರ್ಣಕ್ರಿಯೆ ಉತ್ತೇಜಿಸಲು ಇದು ನೆರವಾಗುತ್ತದೆ.
ಯೋಗ ಅಭ್ಯಾಸ ಮಾಡುವ ಮೂಲಕ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಸದೃಢಗೊಳಿಸಿಕೊಳ್ಳಲು ಆಸಕ್ತಿ ಇದೆಯೆ? ಆಪ್ ಡೌನ್‌ಲೋಡ್ ಮಾಡಿಕೊಂಡು ಲೈವ್ ಸೆಷನ್‌ಗಳಲ್ಲಿ ಉಚಿತವಾಗಿ ಪಾಲ್ಗೊಳ್ಳಿ.
ಪವರ್ ಯೋಗ ಎಂದರೆ ಹೆಚ್ಚು ದೈಹಿಕ ಚಟುವಟಿಕೆಯಿಂದ ಕೂಡಿದ ಯೋಗದ ವಿಧಾನ. ಇದರಿಂದ ದೇಹ ಮತ್ತು ಮನಸ್ಸಿಗೆ ಹೊಸ ಚೈತನ್ಯ ದೊರಕುತ್ತದೆ.
ಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಿಸುವ ಪವರ್ ಯೋಗ ಕಾರ್ಡಿಯೊವಾಸ್ಕುಲರ್ ವರ್ಕ್‌ಔಟ್ ಆಗಿದೆ. ತೂಕ ಇಳಿಕೆಗೆ ಸಹಾಯ ಮಾಡುವ ಪವರ್ ಯೋಗದಿಂದ ದೇಹವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಹಾಗೂ ಒತ್ತಡ ರಹಿತ ಜೀವನ ನಡೆಸಲು ಸಹ ಸಾಧ್ಯವಾಗುತ್ತದೆ. ಜತೆಗೆ ಏಕಾಗ್ರತೆ, ದೇಹದ ಫ್ಲೆಕ್ಸಿಬಿಲಿಟಿ ಹಾಗೂ ಸ್ಟಾಮಿನಾ ಹೆಚ್ಚಿಸುತ್ತದೆ.
ಪವರ್ ಯೋಗ ಎನ್ನುವುದು ಯೋಗದ ಆಧುನಿಕ ವಿಧಾನ. ಇದರಲ್ಲಿ ಅನುಸರಿಸುವ ಆಸನಗಳನ್ನು ಅಭ್ಯಾಸ ಮಾಡುವುದರಿಂದ ಇಡೀ ದೇಹಕ್ಕೆ ವರ್ಕ್‌ಔಟ್ ಆಗುತ್ತದೆ. ಈ ಮೂಲಕ ದೇಹ ಸದೃಢವಾಗುತ್ತದೆ.
ಪವರ್ ಯೋಗ ವರ್ಕ್‌ಔಟ್ ಆರಂಭಿಸುವ ಮೊದಲು ಸೂರ್ಯ ನಮಸ್ಕಾರವನ್ನು ವಾರ್ಮ್ ಅಪ್ ರೀತಿ ಮಾಡಬಹುದು. ದೇಹದ ಎಲ್ಲಾ ಪ್ರಮುಖ ಸ್ನಾಯುಗಳನ್ನೂ ಸಕ್ರಿಯಗೊಳಿಸಿ ಚೈತನ್ಯ ತುಂಬಿಸಲು ಸೂರ್ಯ ನಮಸ್ಕಾರ ಸೂಕ್ತವಾದುದು. ಹಾಗಾಗಿ ಇದರಿಂದ ಸಾಕಷ್ಟು ಲಾಭಗಳಿವೆ.
ತೂಕ ಇಳಿಕೆಗೆ ಅತ್ಯಂತ ಪ್ರಮುಖವಾಗಿರುವ ಇನ್ನೂ ಹಲವಾರು ಪವರ್ ಯೋಗ ಆಸನಗಳಿವೆ. ಉದಾಹರಣೆಗೆ ಉತ್ಥಾನ ಪಾದಾಸನ ಅಥವಾ ರೈಸ್ಡ್ ಫೀಟ್ ಪೋಸ್, ವೀರಭದ್ರಾಸನ, ಅರ್ಧ ಚಂದ್ರಾಸನ, ಪಶ್ಚಿಮೋತ್ತಾಸನ. ತೂಕ ಇಳಿಸಲು ಹಾಗೂ ಒಬೆಸಿಟಿ ತಡೆಗಟ್ಟಲು ಪವರ್ ಯೋಗ ಸೂಕ್ತ ವಿಧಾನ ಎಂದು ಪರಿಗಣಿಸಲಾಗುತ್ತದೆ.
ತೂಕ ಇಳಿಸಲು ಯೋಚಿಸುತ್ತಿದ್ದರೆ ವರ್ಕ್‌ಔಟ್ ಮಾಡಲು ಯೋಗವನ್ನು ಮೊದಲ ಆಯ್ಕೆ ಎಂದು ಸಾಮಾನ್ಯವಾಗಿ ಜನರು ಪರಿಗಣಿಸುವುದಿಲ್ಲ. ಏಕೆಂದರೆ ಯೋಗದ ಹಲವು ವಿಧಾನಗಳನ್ನು ಫ್ಲೆಕ್ಸಿಬಿಲಿಟಿ ಮತ್ತು ವಿಶ್ರಾಂತಿಯ ಉದ್ದೇಶಕ್ಕಾಗಿ ಮಾತ್ರವೇ ಅಭ್ಯಾಸ ಮಾಡಲಾಗುತ್ತದೆ ಎನ್ನುವುದು. ಇಲ್ಲಿ ಪ್ರಮುಖವಾದ ವಿಚಾರ ಏನೆಂದರೆ ತೂಕ ಇಳಿಕೆಯ ನಿಮ್ಮ ಗುರಿಯನ್ನು ಈಡೇರಿಸಲು ಸೂಕ್ತವಾಗಿರುವ ಯೋಗದ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದು. ಈ ನಿಟ್ಟಿನಲ್ಲಿ ಪವರ್ ಯೋಗ ಸೂಕ್ತ ಆಯ್ಕೆ. ಪವರ್ ಯೋಗದ ಜತೆಗೆ ಆರೋಗ್ಯಕ ಆಹಾರ ಅಭ್ಯಾಸದಿಂದ ತೂಕ ಇಳಿಕೆ ಸಾಧ್ಯವಾಗುತ್ತದೆ.
ಸೂಕ್ತವಾದ ಯೋಗದ ವಿಧಾನ ಆಯ್ಕೆ ಮಾಡಲು ಹಾಗೂ ಆಸನದ ಭಂಗಿಗಳನ್ನು ಸರಿಯಾಗಿ ಮಾಡಲು ತಜ್ಞರ ಜತೆ ಅಭ್ಯಾಸ ಮಾಡಿದರೆ ಹೆಚ್ಚಿನ ಲಾಭ ದೊರಕುತ್ತದೆ.
ಮನಸು ಮತ್ತು ದೇಹಕ್ಕೆ ಮತ್ತೆ ಚೈತನ್ಯ ತುಂಬಲು ಯೋಗಾಭ್ಯಾಸ ಮಾಡಲಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು, ವಿಶ್ರಾಂತಿ ಹೊಂದಲು ಇಚ್ಛಿಸುವವರು ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಯೋಗ ಮಹತ್ವದ ಲಾಭ ನೀಡಬಲ್ಲದು. ಕೇವಲ ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಮಾತ್ರವಲ್ಲ ದೈಹಿಕ-ಮಾನಸಿಕ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಲು ಯೋಗ ನೆರವಾಗುತ್ತದೆ.
ಸೂಚನೆ: ಈ ಲೇಖನದ ಉದ್ದೇಶ ತಿಳಿವಳಿಕೆ ಮತ್ತು ಜಾಗೃತಿ ಮೂಡಿಸುವುದು ಮಾತ್ರ. ತಜ್ಞರ ವೈದ್ಯಕೀಯ ಸಲಹೆಗೆ ಪರ್ಯಾಯ ನೀಡುವುದು ಇದರ ಉದ್ದೇಶವಲ್ಲ. ಹೆಚ್ಚಿನ ಮಾಹಿತಿಗಾಗಿ, ಪ್ರಮಾಣಪತ್ರ ಹೊಂದಿರುವ ನಮ್ಮ ಪೋಷಕಾಂಶ ತಜ್ಞರನ್ನು ಸಂಪರ್ಕಿಸಿ.
ಉತ್ತರ: ಯೋಗ ಮಾಡುವವರು ಕಮಿಗುವ ತೂಕವು ವ್ಯಕ್ತಿಗಳಿಗೆ ಬೇರೆ ಬೇರೆಯಾಗಿ ಹೇಗೆ ಬದಲಾಗುತ್ತದೆ ಮತ್ತು ಅವರ ಒತ್ತಡ ಸೇರಿದೆ ಎಂಬಿತ್ತು, ಅವರ ಲಚ್ಚಿತತೆ ಹೊಂದಿದೆ.
ಉತ್ತರ: ಹೌದು, ಯೋಗದ ಸಹಾಯದಿಂದ ನೀವು ಹೊಟ್ಟೆ ತೂಕ ಕಮಿಗಿಸಬಹುದು. ಆದರೆ ಯಾವಾಗಲೂ ಸ್ಪಾಟ್ ರಿಡಕ್ಷನ್ ಗೆ ಲಕ್ಷ್ಯ ಕೊಡುವುದಕ್ಕೆ ಸಿದ್ಧವಾಗಬಾರದು.
ಉತ್ತರ: ಯೋಗ ಮತ್ತು ಗತಿಶೀಲತೆಗೆ ಅವಕಾಶಗಳು ಇವೆರಡರಲ್ಲೂ ಇವೆ. ಯೋಗ ಹೆಚ್ಚು ಬಲವಾಗಿ ಸ್ಟ್ರೆಚಿಂಗ್ ಮತ್ತು ಸಾಕ್ಷಾತ್ಕಾರವನ್ನು ಕೊಡುತ್ತದೆ, ಪರಂತು ಫಿಟ್ನೆಸ್ ನಾಡುತ್ತದೆ. ತೂಕ ಕಡಿಮೆ ಮಾಡಲು ಯಾವುದು ಯಾವ ವ್ಯಕ್ತಿಯ ಸ್ವಕಾರ್ಯದಲ್ಲಿ ಹೆಚ್ಚು ಹೊತ್ತುತ್ತದೆ ಎಂದು ಯಾವ ವರ್ಗದ ಶರೀರ ಕಣಿವೆಯಲ್ಲಿ ನಿಯಂತ್ರಿಸುವುದು.
ಉತ್ತರ: ಹೌದು, ಇದು ತೂಕ ಕಡಿಮೆಗೆ ಪರಿಣಾಮಕಾರಿಯಾಗಿದೆ. ಆದರೆ, ದೀರ್ಘಕಾಲದಲ್ಲಿ ಹೌಥಾ ಯೋಗವನ್ನು ಸೂಚಿಸಲಾಗುತ್ತದೆ. ಆರೋಗ್ಯ ಸಮಸ್ಯೆಗಳು ಹೊಂದಿದ್ದರೆ ಸ್ಥಗಿತವಾಗಿ ಪವರ್ ಯೋಗ ಮಾಡಬಾರದು.
ಉತ್ತರ: ಹೌದು, ಕೆಲವು ಕಠಿಣ ಆಸನಗಳು ನೀವು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಪ್ಲ್ಯಾಂಕ್ ಆಸನ, ವಾರಿಯರ್ ಆಸನ ಮತ್ತು ಡೌನ್‌ವರ್ಡ್ ಡಾಗ್ ಆಸನ ಹೆಚ್ಚಾಗಿ ಪರಿಣಾಮಕಾರಿಯಾದವು.
ಉತ್ತರ: ಹೌದು, 20 ನಿಮಿಷದ ಯೋಗ ಅದು ತೂಕ ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಗಳನ್ನು ಪಡೆಯಲು ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಕಲೊರಿ ನಷ್ಟಕ ಆಹಾರವನ್ನು ಸೇರಿಸಿ.
ಉತ್ತರ: ಯೋಗ ಯಾವಾಗಲೂ ದಿನದ ಯಾವ ಸಮಯದಲ್ಲಿ ಅಭ್ಯಾಸಿಸಲು ಸಾಧ್ಯ. ಜನರು ಬೆಳಗ್ಗೆ ನಡೆಸಿದ್ದು ದಿನವನ್ನು ಶಕ್ತಿಯಿಂದ ಆರಂಭಿಸಲು ಅಥವಾ ಸಂಜೆಯಲ್ಲಿ ಮನಸ್ಸು ಮತ್ತು ಶರೀರವನ್ನು ಸ್ಥಿರಗೊಳಿಸಲು ಅವರು ಅದನ್ನು ಮಾಡುತ್ತಾರೆ.
ಉತ್ತರ: ಯೋಗದಲ್ಲಿ ಕಲೊರಿ ಸುಡಿಯುವುದು ನೀವು ಪೋಸ್ಚರ್‌ಗಳನ್ನು ಹೇಗೆ ಮಾಡುತ್ತೀರೋ ಮತ್ತು ಅವುಗಳನ್ನು ಎಷ್ಟು ಹೊತ್ತು ನಿಲ್ಲಿಸುತ್ತೀರೋ ಅದರ ಮೇಲೆ ನಿರ್ಭರಿಸುತ್ತದೆ. ಸಾಮಾನ್ಯವಾಗಿ, ಯೋಗದ ಒಂದು ಪವರ್ ಸೆಷನ್‌ನಲ್ಲಿ 30 ನಿಮಿಷಗಳ ಕಾಲದಲ್ಲಿ ಪ್ರಾಯದಷ್ಟು 100-115 ಕಲೊರಿಗಳು ಸುಡಲು ಸೂಚಿಸಲಾಗುತ್ತದೆ.
ಉತ್ತರ: ಹೌದು, 25 ನಿಮಿಷದ ಯೋಗ ಅದು ನಿಮ್ಮ ದೇಹವನ್ನು ಹೊಂದಿಕೊಳ್ಳುವುದಕ್ಕೆ ಹೊಂದುವುದು ಅತ್ಯುತ್ತಮ ಅಗತ್ಯ ಮತ್ತು ಶಕ್ತಿಯ ನಡುವೆ ಬೆಂಬಲಿಸುತ್ತದೆ. ಕಡಿಮೆ ತೂಕ ಹೊಂದಲು ಅತ್ಯುತ್ತಮ ನತ್ತರಿಸಲು 25 ನಿಮಿಷದ ಗಾತ್ರವನ್ನು ಸೇರಿಸಿ.
ಉತ್ತರ: ಇಬ್ಬರೂ ಸಮರಾಧ್ಯವಾದರೂ ಯೋಗ ಮತ್ತು ಜಿಮ್‌ನ ವ್ಯತ್ಯಯವಿದೆ. ಯೋಗ ನಿಮ್ಮ ದೇಹವನ್ನು ಮತ್ತು ಮನಸ್ಸನ್ನು ಒಂದೇ ಸಮಯದಲ್ಲಿ ಬಲಗೊಳಿಸುತ್ತದೆ. ಜಿಮ್‌ನ ದೇಹದ ಭಾಗಗಳ ನಿಂಡಿನ್ನು ವಿಚಾರಿಸುತ್ತದೆ. ಇದು ನಿಮ್ಮ ಸ್ವಕಾರ್ಯ ಮತ್ತು ನಿಮ್ಮ ಆಯ್ಕೆಗಳ ಕುರಿತದ್ದು.
ಉತ್ತರ: ತೂಕ ಕಡಿಮೆ ಗತಿಶೀಲತೆಗೆ ಸೇರಿದ ಮಹತ್ವದ ಘಟಕವಾಗಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಕರಿಸುತ್ತದೆ, ಆದರೆ 10 ದಿನಗಳ ಒಳಗೆ ನೀವು ಇಂಚು ತೂಕ ಕಡಿಮೆ ಆಗಬಹುದು. ಸೂರ್ಯ ನಮಸ್ಕಾರ, ಪ್ರಾಣಾಯಾಮ, ಬ್ರೀಜ್ ಆಸನಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರ ಮೂಲಕ ದೇಹದ ಮೇಲೆ ಅಂತರ್ದೃಷ್ಟಿಯನ್ನು ಕಾಣಬಹುದು.
ಉತ್ತರ: ಯೋಗ ನಿಯಮಿತವಾಗಿ ನಡೆಸಿದಾಗ ಯಾವಾಗಲೂ ಕುಗ್ಗಲು ಮತ್ತು ನಡುಗುತ್ತದೆ. ಯಾವ ಅಭ್ಯಾಸಗಳು ಒಳ್ಳೆಯವೆಂದು ನಡೆಯುತ್ತವೆಯೋ ಮತ್ತು ಅವುಗಳನ್ನು ಒಳ್ಳೆಯ ಶರೀರದ ಸ್ಥಿತಿಯಲ್ಲಿ ಕೊರೆಯುವುದಕ್ಕಾಗಿ ನೋಡಿ.